ಹರಿವು ಮಂಸೋರೆ (ಮಂಜುನಾಥ್ ಎಸ್.) ಬರೆದು ನಿರ್ದೇಶಿಸಿದ ಮೊದಲ ಚಿತ್ರ. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ ಅವರ ಅಂತಃಕರಣ ಅಂಕಣದಲ್ಲಿನ ನೈಜ ಘಟನೆಯೊಂದನ್ನು ಮತ್ತು ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. == ಕಥಾ ಹಂದರ == ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆ ಕೊಡಿಸಲು ಜೀವನೋಪಾಯಕ್ಕೆ ಇದ್ದ ಹೊಲವನ್ನೇ ಮಾರಿ ನಗರಕ್ಕೆ ಬರುವ ಬಡ ರೈತ, ಆತನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ಟಿಕೋನದ ಸಕಾರಾತ್ಮಕ ಚಿತ್ರಣವೂ ಇದೆ. == ಪಾತ್ರ ವರ್ಗ == ಸಂಚಾರಿ ವಿಜಯ್ ಶ್ವೇತಾ ದೇಸಾಯಿ ಅರವಿಂದ ಕುಪ್ಲಿಕರ್ ಮಧು ಶ್ರೀ ಮಾಸ್ಟರ್ ಶೋಹಿಬ್ ಎಂ. ಸಿ ಆನಂದ್ ಚೇತನ್ ಶೇಶನ್ ಎಂ. ಪಿ == ಪ್ರಮುಖ ಪ್ರದರ್ಶನಗಳು == ೭ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ೨೦೧೪. . ದೆಹಲಿ ಅಂತರರಾಷ್ಟ್ರೀಯ ಸಿನಿಮೋತ್ಸವ, ೨೦೧೪ == ಪ್ರಶಸ್ತಿಗಳು == ೨೦೧೪ನೇ ಸಾಲಿನ ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ. ೨೦೧೪ನೇ ಸಾಲಿನ ‍ಅತ್ಯುತ್ತಮ ನಿರ್ಮಾಣ ಮತ್ತು ನಿರ್ದೇಶನ ವರ್ಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. == ಉಲ್ಲೇಖಗಳು == == ಬಾಹ್ಯಕೊಂಡಿಗಳು == .